ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ (ರಿ.) ಯ ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್, ಬಂಗಾರಮಕ್ಕಿ ಹಾಗೂ ಶ್ರೀ ಗುರೂಜಿ ಇಂಟರನ್ಯಾಶನಲ್ ಸ್ಕೂಲ್, ಹೊಸನಗರ ಮತ್ತು ಗುರೂಜಿಯವರು ದತ್ತು ಪಡೆದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಡಗೇರಿಯ ಎಲ್ಲಾ ಶಿಕ್ಷಕರಿಗೆ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಹೊಸ ಶಿಕ್ಷಣ ನೀತಿಯ ಪರಿಚಯ ಹಾಗೂ ಪುನಶ್ಚೇತನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಡಾ. ಗುರುರಾಜ ಕರ್ಜಗಿ ಅವರ ಆಕ್ಟ್ (ACT) ಸಂಸ್ಥೆಯ ಡೀನ್ ಆದ ಶ್ರೀಮತಿ ಶೀಲು ರಾವ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಬಗ್ಗೆ ವಿವರಣಾತ್ಮಕ ಉಪನ್ಯಾಸದ ಜೊತೆಗೆ ವಿವಿಧ ರೀತಿಯ ಚಟುವಟಿಕೆ ಹಾಗೂ ಪ್ರಶ್ನೋತ್ತರಗಳ ಮೂಲಕ ಶಿಕ್ಷಕರಿಗೆ ಹೊಸ ಶಿಕ್ಷಣ ನೀತಿಯ ಅಳವಡಿಕೆ, ವಿವಿಧ ಬೋಧನಾ ಕ್ರಮಗಳ ಪರಿಚಯ, ಶಿಕ್ಷಣದ ಮೌಲ್ಯವರ್ಧನೆಯ ಬಗ್ಗೆ ಮಾರ್ಗದರ್ಶನ ನೀಡುವುದರ. ಜೊತೆಗೆ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವಿನ ಸಂವಹನದ ಕುರಿತು ವಿಸ್ತೃತವಾಗಿ ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ತರಬೇತಿ ನೀಡಿದ ಶ್ರೀಮತಿ ಶೀಲು ರಾವ್ ಅವರನ್ನು ಸಂಸ್ಥೆಯ ಪರವಾಗಿ ಶ್ರೀ ಗುರೂಜಿಯವರು ಸನ್ಮಾನಿಸಿದರು.
Follow Me :