![](https://shreemaruthischool.org/wp-content/uploads/2025/02/WhatsApp-Image-2025-02-01-at-9.39.29-AM-1024x1024.jpeg)
ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ & ಪಿ. ಯು. ಕಾಲೇಜ್‌ನಲ್ಲಿ ದಿನಾಂಕ: 30-01-2025 ರಂದು ‘ಹುತಾತ್ಮರ ದಿನ’ವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು ಸಭೆಯನ್ನುದ್ದೇಶಿಸಿ ಮಾತನಾಡಿ ತಮ್ಮ ಪೀಠಾರೋಹಣದ ರಜತಮಹೋತ್ಸವದ ಶುಭ ಸಂದರ್ಭದಲ್ಲಿ, ಇನ್ನು ಮುಂದೆ ಯಾವುದೇ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು 90 ಪ್ರತಿಶತಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿ ನಮ್ಮ ವಿದ್ಯಾಸಂಸ್ಥೆಯಲ್ಲಿ 11ನೇ ತರಗತಿಗೆ ಪ್ರವೇಶ ಪಡೆದಲ್ಲಿ ಅವರಿಂದ ಕೇವಲ 1 ರೂಪಾಯಿ ಬೋಧನಾ ಶುಲ್ಕವನ್ನು ಪಡೆದು ಶಿಕ್ಷಣ ನೀಡುವುದಾಗಿ ಘೋಷಿಸಿದರು. ಹಾಗೇ ವಿದ್ಯಾರ್ಥಿಗಳು ದೇಶವನ್ನು ಪ್ರೀತಿಸುವುದನ್ನು ಕಲಿಯಬೇಕು, ದೇಶಕ್ಕಾಗಿ ಬದುಕಬೇಕು ಸೈನಿಕರು ಗಡಿಯಲ್ಲಿ ಭದ್ರವಾಗಿ ಕಾಯುತ್ತಿರುವುದರಿಂದ ನಾವು ನಿರ್ಭೀತಿಯಿಂದ ಬದುಕುತ್ತಿದ್ದೇವೆ ಹಾಗಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಕೂಡ ಸೇನಾಪಡೆಯಲ್ಲಿ ಸೇವೆ ಸಲ್ಲಿಸುವಂತಾಗಲಿ ಎಂದು ಸೇರಿದ ಸರ್ವರನ್ನು ಹರಸಿ ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಶಾಂತಿವನ ಟ್ರಸ್ಟ, ಧರ್ಮಸ್ಥಳ ವತಿಯಿಂದ ನಡೆಯುವ ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿ ಕುಮಾರ ಜಿಷ್ಣು ಭಟ್ ಇವರನ್ನು ಸನ್ಮಾನಿಸಲಾಯಿತು.
Shree Maruthi Residential School and PU College, Bangaramakki meaningfully observed the Martyrs’ Day on 30 January with the students performing the cultural programmes displaying the bravery and sacrifice of the valiant martyrs of our nation.
His Holiness Shri Shri Shri Maruthi Guruji, the President of Shree Maruthi Residential School and PU College in his address encouraged the students to cultivate spirit of patriotism in each one’s heart to the extent to choose a career later to serve in the Army, Navy and Airforce. In celebrating the silver jubilee year of his elevation to the priesthood and for benefits of students of our locality, Guruji declared that any student who scores above 90% in class X will be offered a seat in PUC first year with ₹1 (one) and the same applies in the PUC second year too.
During the function, Jishnu Bhat of SMRS & PUC was facilitated for securing 3rd position in the State Level Speech Competition initiated by Shanthivana Trust, Dharmasthala.
![](http://shreemaruthischool.org/wp-content/uploads/2025/02/WhatsApp-Image-2025-02-01-at-9.39.31-AM-1-1024x1024.jpeg)
![](http://shreemaruthischool.org/wp-content/uploads/2025/02/WhatsApp-Image-2025-02-01-at-9.39.30-AM-1-1024x1024.jpeg)
![](http://shreemaruthischool.org/wp-content/uploads/2025/02/WhatsApp-Image-2025-02-01-at-9.39.32-AM-1024x1024.jpeg)
![](http://shreemaruthischool.org/wp-content/uploads/2025/02/WhatsApp-Image-2025-02-01-at-9.39.31-AM-1024x1024.jpeg)
![](http://shreemaruthischool.org/wp-content/uploads/2025/02/WhatsApp-Image-2025-02-01-at-9.39.30-AM-1024x1024.jpeg)
https://www.instagram.com/p/DFg-IuvTyz7/?igsh=MWN0cGlpOTVoZGk5eQ==
Follow Me :