ಸಿ. ಬಿ. ಎಸ್. ಇ. 10ನೇ ತರಗತಿ ಪರೀಕ್ಷೆಯಲ್ಲಿ 100% ಫಲಿತಾಂಶ
ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ಮತ್ತು ಪಿ. ಯು. ಕಾಲೇಜ್ ಬಂಗಾರಮಕ್ಕಿಯ ವಿದ್ಯಾರ್ಥಿಗಳು 2026ರ ಸಿ. ಬಿ. ಎಸ್. ಇ. 10ನೇ ತರಗತಿ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿ ಉತ್ತಮ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಕುಮಾರ. ನಕುಲ್ ರಘುವೀರ ನಾಯ್ಕ 94.6% ಫಲಿತಾಂಶ ದೊಂದಿಗೆ ಶಾಲೆಗೆ ಪ್ರಥಮ ಸ್ಥಾನ, ಕುಮಾರ. ಶ್ರೇಯಸ್ ಸುರೇಶ ನಾಯ್ಕ 91.2% ಫಲಿತಾಂಶ ದೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ ಹಾಗೂ 85.6% ಫಲಿತಾಂಶ ದೊಂದಿಗೆ ಕುಮಾರ. ಪ್ರತೋಷ ದಯಾನಂದ ನಾಯ್ಕ ಮತ್ತು ಕುಮಾರ. ರಾಕೇಶ ಮಂಜುನಾಥ ಭಟ್ ಇವರುಗಳು ಜಂಟಿಯಾಗಿ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.
ವಿಷಯವಾರು, ಕುಮಾರ. ನಕುಲ್ ರಘುವೀರ ನಾಯ್ಕ ಇವನು ಇಂಗ್ಲೀ಼ಷಿನಲ್ಲಿ 99 ಅಂಕಗಳು, ಹಿಂದಿಯಲ್ಲಿ 98 ಅಂಕಗಳು, ಗಣಿತದಲ್ಲಿ 86 ಅಂಕಗಳು ಹಾಗೂ ವಿಜ್ಞಾನ ವಿಷಯದಲ್ಲಿ 97 ಅಂಕಗಳನ್ನು ಪಡೆದಿದ್ದು, ಸಮಾಜ ವಿಜ್ಞಾನದಲ್ಲಿ ಕುಮಾರ. ರಾಕೇಶ ಮಂಜುನಾಥ ಭಟ್ 97 ಅಂಕ ಹಾಗೂ ಕುಮಾರಿ. ಶಿವಾನಿ ಪ್ರಶಾಂತ ಶೆಟ್ಟಿ ಇವರು ಕನ್ನಡದಲ್ಲಿ 99 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಶೇಕಡಾ 100 ಫಲಿತಾಂಶ ದಾಖಲಿಸಿ ಅತ್ಯುತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ, ಈ ಸಾಧನೆಗೆ ಶ್ರಮಿಸಿದ ಎಲ್ಲಾ ಶಿಕ್ಷಕ ಮತ್ತು ಸಿಬ್ಬಂದಿವರ್ಗದವರಿಗೆ, ಹಾಗೂ ಸಹಕರಿಸಿದ ಎಲ್ಲಾ ಪೋಷಕರಿಗೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು, ಕಾರ್ಯದರ್ಶಿಗಳು ಹಾಗೂ ಶಾಲೆಯ ಆಡಳಿತ ಮಂಡಳಿ ಮತ್ತು ಪೋಷಕ – ಶಿಕ್ಷಕರ ಸಂಘದ ಸದಸ್ಯರು ಹಾಗೂ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ.






