ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ಎಂಡ್ ಪಿ. ಯು. ಕಾಲೇಜ್‌ನಲ್ಲಿ ಮುದ್ದು ಮಕ್ಕಳಿಗಾಗಿ ರಾಧಾ-ಕೃಷ್ಣ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನರ್ಸರಿ, ಎಲ್. ಕೆ. ಜಿ., ಯು. ಕೆ. ಜಿ., 1, 2 ಮತ್ತು 3ನೇ ತರಗತಿಯ ಮುದ್ದುಮಕ್ಕಳು ಉತ್ಸಾಹದಿಂದ ರಾಧಾ-ಕೃಷ್ಣ ವೇಷಧಾರಿಗಳಾಗಿ ಭಾಗವಹಿಸಿ ಸ್ಪರ್ಧೆಗೆ ಮೆರುಗು ನೀಡಿದರು.