Teachers’ Day Celebration – 2024

ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ & ಪಿ. ಯು. ಕಾಲೇಜ್‌ನಲ್ಲಿ ಶಿಕ್ಷಕರ ದಿನವನ್ನು ಸಡಗರ ಸಂಭ್ರಮ ದೊಡನೆ ಆಚರಿಸಲಾಯಿತು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರದ ಧರ್ಮಾಧಿಕಾರಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು ವಹಿಸಿದ್ದರು.

ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ವಿದ್ವಾನ್ ಡಾ|| ಗಜಾನನ ಶರ್ಮಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಾಲಕರ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀ ವಿನಾಯಕ ನಾಯ್ಕ್, ಪಾಲಕರ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಶ್ರೀ ವಿಷ್ಣುಮೂರ್ತಿ ಹೆಗಡೆ, ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ಮಂಜುನಾಥ ಎಂ. ಎನ್., ಶಾಲೆಯ ಆಡಳಿತ ನಿರ್ದೇಶಕ ಶ್ರೀ ಜಿ. ಟಿ. ಹೆಗಡೆ, ಶಾಲೆಯ ಪ್ರಾಂಶುಪಾಲರಾದ ಶ್ರೀ ಎಸ್. ಜೊನ್ ಬೊಸ್ಕೊ, ಶಿಕ್ಷಕ – ಶಿಕ್ಷಕೇತರ ಸಿಬಂದಿಗಳು ಹಾಜರಿದ್ದರು.

ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಸಂಶೋಧಕರು ಹಾಗೂ ಕಾದಂಬರಿಕಾರರಾದ ವಿದ್ವಾನ್ ಡಾ|| ಗಜಾನನ ಶರ್ಮಾ ಸಭೆಯನ್ನುದ್ದೇಶಿಸಿ ಮಾತನಾಡಿ, ತಮ್ಮ ವಿದ್ಯಾರ್ಥಿ ಜೀವನದ ಸಿಹಿನೆನಪುಗಳನ್ನು ಹಂಚಿಕೊಂಡರು. ಗುರು – ಶಿಷ್ಯ ಸಂಬಂಧದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಇದೆ ಸಂದರ್ಭದಲ್ಲಿ ಗೇರುಸೊಪ್ಪ ಪ್ರಾಂತ್ಯದ ಐತಿಹಾಸಿಕ ಮಹತ್ವವನ್ನು ವಿವರಿಸುತ್ತಾ, ರಾಣಿ ಚೆನ್ನಭೈರಾದೇವಿಯ ಜೀವನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು, ವಿದ್ಯಾರ್ಥಿಗಳು ತಮ್ಮ ತಾಯಿ ತಂದೆಯರನ್ನು ತಮ್ಮ ಬದುಕಿಗೆ ಮಾದರಿಯನ್ನಾಗಿ ತೆಗೆದುಕೊಳ್ಳಬೇಕು, ಅವರಿಗೆ ಮೊದಲವಂದನೆ ಸಲ್ಲಬೇಕು, ನಂತರ ನಮ್ಮ ಜೀವನಕ್ಕೆ ಗುರಿ ತೋರಿಸುವವರು ಶಿಕ್ಷಕರು, ನಮ್ಮ ಶಿಕ್ಷಕರು ಹಾಗೂ ಅವರು ತೋರಿಸಿದ ಮಾರ್ಗವನ್ನು ಎಂದಿಗೂ ಮರೆಯಬಾರದು, ಎಂಬ ಹಿತವಚನಗಳೊಂದಿಗೆ ಸರ್ವರಿಗೂ ಶುಭಾಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು ಎಲ್ಲಾ ಶಿಕ್ಷಕ – ಶಿಕ್ಷಕೇತರ ಸಿಬಂದಿಗಳಿಗೆ ತಮ್ಮ ಅಮೃತ ಹಸ್ತದಿಂದ ಉಡುಗೊರೆಗಳನ್ನು ನೀಡಿ ಆಶೀರ್ವದಿಸಿದರು.

ಇದೆ ಸಂದರ್ಭದಲ್ಲಿ ಬಿ. ಎಡ್. ಪದವಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನಗಳಿಸಿದ ನಮ್ಮ ಶಾಲೆಯ ಶಿಕ್ಷಕಿ ನಿಧಿ ದೇಶಭಂಡಾರಿ ಇವರನ್ನು ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು ಸನ್ಮಾನಿಸಿ ಆಶೀರ್ವದಿಸಿದರು.

ಸಮಾರಂಭದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಪೋಷಕವೃಂದ, ಕ್ಷೇತ್ರದ ಭಕ್ತವೃಂದ ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಹಾಜರಿದ್ದು ಕಾರ್ಯಕ್ರಮದ ಮೆರುಗನ್ನು ಇಮ್ಮಡಿಯಾಗಿಸಿದರು.

ಈ ಕಾರ್ಯಕ್ರಮದ ಸಂಪೂರ್ಣ ಆಯೋಜನೆ ಹಾಗೂ ನಿರ್ವಹಣೆಯನ್ನು ಶಾಲೆಯ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದರು.

https://www.instagram.com/p/C_izhMTyaXV/?utm_source=ig_web_copy_link&igsh=MzRlODBiNWFlZA==

Follow Me :